Arrow icon
October 13, 2021
ಸಾಲ ನೀಡಿಕೆಗೆ ಪಾಲುದಾರಿಕೆ ಪ್ರಕಟಿಸಿದ ಯು ಗ್ರೊ ಕ್ಯಾಪಿಟಲ್ ಮತ್ತು ಕಿನಾರಾ ಕ್ಯಾಪಿಟಲ್

  • ಕಿನಾರಾ ಕ್ಯಾಪಿಟಲ್, ಯು ಗ್ರೊ ಕ್ಯಾಪಿಟಲ್ಸ್‍ನ ಎಕ್ಸ್-ಸ್ಟ್ರೀಮ್ ಸೌಲಭ್ಯದಡಿ ಸಾಲ ಸೌಲಭ್ಯ ಒದಗಿಸಲಿದೆ
  • ‘ಎಂಎಸ್‍ಎಂಇ`ಗಳಿಗೆ ಜಾಮೀನುರಹಿತ ರೂ 100 ಕೋಟಿ ಮೊತ್ತದ ಸಾಲ ಸೌಲಭ್ಯ ವಿಸ್ತರಿಸಲು ಯು ಗ್ರೊ ಬದ್ಧತೆ

  ಮುಂಬೈ, ಅಕ್ಟೋಬರ್ 13, 2021: ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಕಿರು, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ (ಎಂಎಸ್‍ಎಂಇ) ಸಾಲ ನೀಡುವುದಕ್ಕೆ ಆದ್ಯತೆ ನೀಡುವ ಯು ಗ್ರೊ ಕ್ಯಾಪಿಟಲ್ (U ಉಖಔ ಅಚಿಠಿiಣಚಿಟ) , ಭಾರತದಲ್ಲಿ ಸಣ್ಣ ಉದ್ದಿಮೆದಾರರಿಗೆ ಜಾಮೀನುರಹಿತ ಉದ್ದಿಮೆ ಸಾಲ ನೀಡುವ ಉದ್ದೇಶದಿಂದ ಅತ್ಯಂತ ತ್ವರಿತವಾಗಿ ಬೆಳವಣಿಗೆ ದಾಖಲಿಸುತ್ತಿರುವ ಹಣಕಾಸು – ತಂತ್ರಜ್ಞಾನ ಕಂಪನಿ ಕಿನಾರಾ ಕ್ಯಾಪಿಟಲ್ (ಏiಟಿಚಿಡಿಚಿ ಅಚಿಠಿiಣಚಿಟ) ಜೊತೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ಇಂದು ಇಲ್ಲಿ ಪ್ರಕಟಿಸಿದೆ. ತಯಾರಿಕೆ, ವ್ಯಾಪಾರ ಮತ್ತು ಸೇವಾ ವಲಯದಲ್ಲಿ ‘ಎಂಎಸ್‍ಎಂಇ`ಗಳಿಗೆ 2022ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಎರಡೂ ಕಂಪನಿಗಳು ಒಟ್ಟಾಗಿ ರೂ 100 ಕೋಟಿ ಮೊತ್ತದ ಸಾಲ ವಿತರಿಸಲು ಉದ್ದೇಶಿಸಿವೆ.

  ‘ಎಂಎಸ್‍ಎಂಇ’ ವಲಯದ ಸಾಲದ ಅಗತ್ಯಗಳನ್ನು ಪೂರೈಸುವ ಉದ್ದೇಶದ ಈ ಪಾಲುದಾರಿಕೆಯು, ಯು ಗ್ರೋದ ದತ್ತಾಂಶ ವಿಶ್ಲೇಷಣೆ ಆಧರಿಸಿದ ನಿರ್ಧಾರವು ಕಿನಾರಾ ಕ್ಯಾಪಿಟಲ್‍ನ ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ.

  ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ (ಂI/ಒಐ) ಆಧಾರಿತ ನಿರ್ಧಾರ ಮತ್ತು ಸೇವಾ ಶುಲ್ಕ ಆಧಾರಿತ ಸಾಲ ಸೌಲಭ್ಯದ ವಿಧಾನದಲ್ಲಿ ಕಿನಾರಾ ಕ್ಯಾಪಿಟಲ್, ‘ಎಂಎಸ್‍ಎಂಇ’ ಉದ್ಯಮಿಗಳ ಸಾಲದ ಅರ್ಜಿ ಸ್ವೀಕಾರದಿಂದ ಹಿಡಿದು ಸಾಲ ವಿತರಣೆ ಪ್ರಕ್ರಿಯೆಯನ್ನು 24 ಗಂಟೆಗಳ ಒಳಗೆ ಪೂರ್ಣಗೊಳಿಸಲಿದೆ. 1 ರಿಂದ 3ನೇ ಹಂತದ ನಗರಗಳಲ್ಲಿ 300ಕ್ಕೂ ಹೆಚ್ಚು ಪಿನ್‍ಕೋಡ್‍ಗಳಾದ್ಯಂತ ‘ಎಂಎಸ್‍ಎಂಇ’ಗಳು ಈ ಪಾಲುದಾರಿಕೆಯಿಂದ ಪ್ರಯೋಜನ ಪಡೆಯಲಿವೆ. ಕಿನಾರಾ ಕ್ಯಾಪಿಟಲ್ ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿರುವ ಆಂಧ್ರಪ್ರದೇಶ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿನ ನಗರ, ಅರೆ – ನಗರ ಮತ್ತು ಪಟ್ಟಣಗಳಲ್ಲಿನ ‘ಎಂಎಸ್‍ಎಂಇ’ಗಳಿಗೆ ಇದರಿಂದ ಪ್ರಯೋಜನವಾಗಲಿದೆ.

  ಈ ಪಾಲುದಾರಿಕೆಯನ್ನು ಯು ಗ್ರೊ ಕ್ಯಾಪಿಟಲ್‍ನ ‘ಗ್ರೋ ಎಕ್ಸ್-ಸ್ಟ್ರೀಮ್’ ಸೌಲಭ್ಯದ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ. ಹಣಕಾಸು ತಂತ್ರಜ್ಞಾನ ಕಂಪನಿಗಳು, ಪಾವತಿ ಸೌಲಭ್ಯ, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‍ಬಿಎಫ್‍ಸಿ), ಹೊಸ ಬ್ಯಾಂಕ್‍ಗಳು, ಮಾರುಕಟ್ಟೆ ತಾಣಗಳು ಮತ್ತು ಇತರ ಡಿಜಿಟಲ್ ತಾಣಗಳ ಅಗತ್ಯಗಳನ್ನೆಲ್ಲ ಒದಗಿಸುವ ಅಪ್ಲಿಕೇಷನ್ ಪ್ರೊಗ್ರಾಮಿಂಗ್ ಇಂಟೆಗ್ರೆಷನ್ (ಂPI) ಆಧಾರಿತ ತಂತ್ರಜ್ಞಾನ ಸೌಲಭ್ಯ ಇದಾಗಿದೆ. ಈ ಸೌಲಭ್ಯದ ಮೂಲಕ, ಯು ಗ್ರೊ ‘ಎಂಎಸ್‍ಎಂಇ’ ಸಾಲಗಳನ್ನು ಸಮನ್ವಯಗೊಳಿಸಿ ವಿತರಿಸಲಿದೆ. ಜೊತೆಗೆ ದೊಡ್ಡ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಸಹಭಾಗಿತ್ವದಲ್ಲಿಯೂ ಕೂಡ ಸಾಲ ಸೌಲಭ್ಯ ಒದಗಿಸಲಿದೆ. ಉದ್ದಿಮೆದಾರರ ಸಾಲದ ಅಗತ್ಯಗಳನ್ನು ಸುಲಭವಾಗಿ ಒದಗಿಸುವ ಉದ್ದೇಶಕ್ಕೆ ಕಂಪನಿಯು ಒಂದಕ್ಕಿಂತ ಹೆಚ್ಚು ಭಾಗಿದಾರರೊಂದಿಗೆ 15ಕ್ಕೂ ಹೆಚ್ಚು ಪಾಲುದಾರಿಕೆಗಳಿಗೆ ಸಹಿ ಹಾಕಿದೆ.

  ಉದ್ದಿಮೆ – ವ್ಯಾಪಾರ ಬೆಳವಣಿಗೆಗೆ ಹಣಕಾಸು ಸೌಲಭ್ಯದ ಅಗತ್ಯವಿರುವ ನೂರಾರು ಸಣ್ಣ ವ್ಯಾಪಾರ ಉದ್ಯಮಿಗಳಿಗೆ ಔಪಚಾರಿಕ ಸಾಲದ ಸೌಲಭ್ಯವನ್ನು ಸುಲಭವಾಗಿ ಒದಗಿಸುವ ಗುರಿಯನ್ನು ಯು ಗ್ರೊ ಕ್ಯಾಪಿಟಲ್ ಮತ್ತು ಕಿನಾರಾ ಕ್ಯಾಪಿಟಲ್ ಜಂಟಿಯಾಗಿ ಹೊಂದಿವೆ.

  ಯು ಗ್ರೊ ಕ್ಯಾಪಿಟಲ್‍ನ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಚೀಂದ್ರ ನಾಥ್ ಅವರು ಈ ಬಗ್ಗೆ ಮಾತನಾಡಿ, `ಎಂಎಸ್‍ಎಂಇಗಳ ಹಣಕಾಸು ಲಭ್ಯತೆ ಮತ್ತು ಸುಲಭವಾಗಿ ಸಾಲ ದೊರೆಯುವುದರ ಕೊರತೆಯನ್ನು ನಿವಾರಿಸುವ ನಮ್ಮ ಉದ್ದೇಶ ಸಾಧಿಸಲು ಕಿನಾರಾ ಕ್ಯಾಪಿಟಲ್ ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ. ‘ಎಂಎಸ್‍ಎಂಇ’ಗಳ ಹಣಕಾಸು ಸೇರ್ಪಡೆ ಉದ್ದೇಶ ಸಾಧಿಸಲು ಹಣಕಾಸು ತಂತ್ರಜ್ಞಾನ ಸಂಸ್ಥೆಗಳ ಜೊತೆಗಿನ ಪಾಲುದಾರಿಕೆಯು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂಬುದು ನಮ್ಮ ನಂಬಿಕೆಯಾಗಿದೆ. ಇದು ನಮ್ಮ ತಂತ್ರಜ್ಞಾನ ಆಧಾರಿತ ಸೌಲಭ್ಯವಾಗಿರುವ ‘ಗ್ರೋ ಎಕ್ಸ್-ಸ್ಟ್ರೀಮ್’ (ಉಡಿo ಘಿ-sಣಡಿeಚಿm) ಅನ್ನು ವಿನ್ಯಾಸಗೊಳಿಸಲು ಪ್ರೇರಣೆ ನೀಡಿದೆ. ಈ ರೀತಿಯ ಪಾಲುದಾರಿಕೆಗಳು ಫಲಪ್ರದವಾಗಲು ಇದು ಅನುವು ಮಾಡಿಕೊಡುತ್ತದೆ. ನಾವು ಕಿನಾರಾ ಕ್ಯಾಪಿಟಲ್ ಜೊತೆಗೆ ದೀರ್ಘಾವಧಿಯ ಸಂಬಂಧವನ್ನು ಎದುರು ನೋಡುತ್ತಿದ್ದೇವೆ. ಹೆಚ್ಚೆಚ್ಚು ‘ಎಂಎಸ್‍ಎಂಇ’ಗಳನ್ನು ಬೆಂಬಲಿಸುವ ನಮ್ಮ ಸಾಮಾನ್ಯ ಗುರಿ ಸಾಧಿಸುವ ದಿಸೆಯಲ್ಲಿ ನಾವು ಜೊತೆಯಾಗಿ ಕಾರ್ಯನಿರ್ವಹಿಸುತ್ತೇವೆ’ ಎಂದು ಹೇಳಿದ್ದಾರೆ.

  ಕಿನಾರಾ ಕ್ಯಾಪಿಟಲ್‍ನ ಸಂಸ್ಥಾಪಕ ಮತ್ತು ಸಿಇಒ ಹಾರ್ದಿಕಾ ಶಾ ಅವರು ಮಾತನಾಡಿ, ‘ಯು ಗ್ರೊ ಕ್ಯಾಪಿಟಲ್ ಜೊತೆಗೆ ಕೆಲಸ ಮಾಡಲು ನಮಗೆ ಅಪಾರ ಸಂತೋಷವಾಗುತ್ತಿದೆ. ಭಾರತದ ಸಣ್ಣ ವ್ಯಾಪಾರಿ ಉದ್ಯಮಿಗಳನ್ನು ಬೆಂಬಲಿಸುವ ನಮ್ಮ ಉದ್ದೇಶ ಕಾರ್ಯಗತಗೊಳಿಸಲು ಅವರು ಅಗತ್ಯ ನೆರವು ನೀಡಲಿದ್ದಾರೆ. ಯು ಗ್ರೊ, ತನ್ನ ಹಣಕಾಸು ಮತ್ತು ತಂತ್ರಜ್ಞಾನ ಸೌಲಭ್ಯಗಳ ನೆರವಿನಿಂದ ‘ಎಂಎಸ್‍ಎಂಇ’ ವಲಯಕ್ಕೆ ಸಾಲದ ಸೌಲಭ್ಯ ಸುಲಭಗೊಳಿಸಲು ನಮ್ಮೊಂದಿಗೆ ಕೈಜೋಡಿಸಿದೆ. ಇದು ಸ್ಥಳೀಯ ಮತ್ತು ರಾಷ್ಟ್ರೀಯ ಆರ್ಥಿಕತೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ವರ್ಷದಲ್ಲಿ ಉದ್ದಿಮೆ – ವಹಿವಾಟುಗಳು ಪುನಶ್ಚೇತನ ಮತ್ತು ಬೆಳವಣಿಗೆಯನ್ನು ಮುಂದುವರಿಸಲಿರುವುದರಿಂದ ಉದ್ಯೋಗ ಸೃಷ್ಟಿಯೂ ಸದ್ಯದ ಅಗತ್ಯವಾಗಿದೆ’ ಎಂದು ಹೇಳಿದ್ದಾರೆ.

  ಈ ಪಾಲುದಾರಿಕೆಯು ಉದ್ಯಮಿಗಳಿಗೆ ಸಾಲ ಸೌಲಭ್ಯವನ್ನು ಅಡಚಣೆ ಮುಕ್ತ ರೀತಿಯಲ್ಲಿ ಒದಗಿಸುವ ಗುರಿಯನ್ನು ಹೊಂದಿದೆ. ‘ಎಂಎಸ್‍ಎಂಇ’ಗಳು ಸಾಲ ಪಡೆಯುವುದಕ್ಕೆ ಕೇವಲ ಕಿನಾರಾ ಕ್ಯಾಪಿಟಲ್‍ನಲ್ಲಿ ಒಮ್ಮೆ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ. ನಂತರದ ಹಂತದಲ್ಲಿ ಆನ್‍ಲೈನ್, ಫೋನ್ ಮೂಲಕ ಅಥವಾ ಕಿನಾರಾ ಪ್ರತಿನಿಧಿಯೊಂದಿಗೆ ಸಾಲ ಪಡೆಯುವ ಪ್ರಕ್ರಿಯೆಯನ್ನು ವೈಯಕ್ತಿಕವಾಗಿ ಆರಂಭಿಸಬಹುದು. ಒಂದೊಮ್ಮೆ ಸಾಲವನ್ನು ಅನುಮೋದಿಸಿದ ನಂತರ, ಸಾಲ ಮಂಜೂರಾತಿ ದಾಖಲೆಗಳು ಯು ಗ್ರೊ ಕ್ಯಾಪಿಟಲ್ ಮತ್ತು ಕಿನಾರಾ ಕ್ಯಾಪಿಟಲ್ ಎರಡರ ಹೆಸರುಗಳನ್ನು ಒಳಗೊಂಡಿರುತ್ತವೆ. ಗ್ರಾಹಕರ ಸಾಲ ಸೌಲಭ್ಯವನ್ನು ನಿರ್ವಹಿಸುವುದನ್ನು ಕಿನಾರಾ ಕ್ಯಾಪಿಟಲ್ ಮುಂದುವರಿಸುತ್ತದೆ. ಈ ಸಾಲ ಸೌಲಭ್ಯದ ನೆರವಿನ ಪ್ರಕ್ರಿಯೆಯು ಸಂಪೂರ್ಣವಾಗಿ ಸ್ಥಳೀಯ ಭಾಷೆಗಳಲ್ಲಿ ಇರಲಿದೆ. ಜೊತೆಗೆ ವಹಿವಾಟಿನ ಬೆಳವಣಿಗೆಗೆ ನೆರವಾಗುವ ಉಚಿತ ಡಿಜಿಟಲ್ ಕಾರ್ಯಾಗಾರದ ಸರಣಿ ಮತ್ತು ವಹಿವಾಟಿನ ಸಲಹೆಗಳಂತಹ ಹೆಚ್ಚುವರಿ ಬೆಂಬಲವನ್ನೂ ಒದಗಿಸುತ್ತದೆ.

  ‘ಎಂಎಸ್‍ಎಂಇ’ಗಳಿಗೆ ಲಭ್ಯವಿರುವ ರೂ 1 ಲಕ್ಷದಿಂದ ರೂ 30 ಲಕ್ಷದವರೆಗಿನ ಸಾಲದ ಮರುಪಾವತಿ ಅವಧಿಯು 12 ರಿಂದ 60 ತಿಂಗಳ ಅವಧಿಯವರೆಗೆ ಇರುತ್ತದೆ. ದುಡಿಯುವ ಬಂಡವಾಳಕ್ಕೆ ಹಣಕಾಸು ಸೌಲಭ್ಯ ಲಭ್ಯ ಇರಲಿದೆ. ಕಿನಾರಾ ಕ್ಯಾಪಿಟಲ್‍ನಿಂದ ನೇರವಾಗಿ ಆಸ್ತಿಯ ಖರೀದಿಗೆ ಸಾಲ ದೊರೆಯಲಿದೆ. ಮಹಿಳೆಯರ ನೇತೃತ್ವದಲ್ಲಿನ ಉದ್ದಿಮೆ – ವಹಿವಾಟುಗಳಿಗೆ ‘ಹರ್ ವಿಕಾಸ್’ (ಊeಡಿಗಿiಞಚಿs) ಕಾರ್ಯಕ್ರಮದಡಿ ಸ್ವಯಂಚಾಲಿತ, ಮುಂಗಡ ರಿಯಾಯ್ತಿಯ ಸಾಲ ಸೌಲಭ್ಯ ದೊರೆಯಲಿದೆ.

  ಕಿನಾರಾ, 6 ರಾಜ್ಯಗಳಲ್ಲಿ 110 ಶಾಖೆಗಳನ್ನು ಹೊಂದಿದೆ. 60,000 ಕ್ಕೂ ಅಧಿಕ ಆಧಾರ / ಜಾಮೀನು ರಹಿತ ಸಾಲವನ್ನು ಸಣ್ಣ ಉದ್ಯಮಿಗಳಿಗೆ ಒದಗಿಸಿದೆ. ಕಿನಾರಾದ ಈ ಆರ್ಥಿಕ ಸೇರ್ಪಡೆ ಬದ್ಧತೆಯ ಸಾಮಾಜಿಕ ಪರಿಣಾಮವು ಉದ್ಯಮಿಗಳಿಗೆ ರೂ 700 ಕೋಟಿಗಳಿಗಿಂತ ಹೆಚ್ಚಿನ ವರಮಾನವನ್ನು ಸೃಷ್ಟಿಸಿದೆ. ಭಾರತದ ಸ್ಥಳೀಯ ಎಲ್ಲ ಆರ್ಥಿಕತೆಗಳಲ್ಲಿ 2,50,000 ದಷ್ಟು ಉದ್ಯೋಗಗಳನ್ನು ಸೃಷ್ಟಿಸಿದೆ.

  ಯು ಗ್ರೊ ಕ್ಯಾಪಿಟಲ್, ಪ್ರಸ್ತುತ 9 ರಾಜ್ಯಗಳಲ್ಲಿ 34 ಶಾಖೆಗಳನ್ನು ಹೊಂದಿದೆ. 2022ರ ಹಣಕಾಸು ವರ್ಷದ ವೇಳೆಗೆ ಶಾಖೆಯ ಜಾಲವನ್ನು 100 ಕ್ಕೆ ವಿಸ್ತರಿಸುವ ಗುರಿಯನ್ನು ಇದು ಹೊಂದಿದೆ. ಮುಂಬರುವ 4 ಹಣಕಾಸು ವರ್ಷಗಳಲ್ಲಿ 2,50,000 ‘ಎಂಎಸ್‍ಎಂಇ’ಗಳನ್ನು ತಲುಪುವ ಉದ್ದೇಶ ಹೊಂದಿದೆ.

  Written by
  • Tags
  • #colending
  • #financialinclusion
  • #India
  • #KinaraCapital
  • #MSMEs
  • #partners
  • #TeamKinara
  • #UGro

  You may also like

  January 3, 2022

  Easing Liquidity Crunch for Mid-Sized and…

  Read More

  In an exclusive article for ET BFSI, our Founder and CEO Hardika Shah talks about NBFC lending amidst the pandemic, regulations in the sector and various measures taken during the year.

  Read More
  December 11, 2021

  MPW: Why Women Remain a Minority…

  Read More

  In an interaction with Business Today, our Founder and CEO Hardika Shah talks about her experience as the founder of Kinara and gender equality in startup ecosystem

  Read More